ಕಾರವಾರ: ಅರಣ್ಯವಾಸಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಶಿರಸಿಯಲ್ಲಿ ನ.11 ರಂದು ಸಮಾಲೋಚನೆ ಸಭೆ : ನಗರದಲ್ಲಿ ರವೀಂದ್ರ ನಾಯ್ಕ ಮಾಹಿತಿ
ಕಾರವಾರ: ಕಾನೂನು ಮತ್ತು ಸರ್ಕಾರದ ಆದೇಶ ಉಲ್ಲಂಘಿಸಿ, ರಾಜ್ಯದಲ್ಲಿ ಆರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಮತ್ತು ಆದೇಶ ಜರುಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ ಅರಣ್ಯವಾಸಿಯನ್ನು ಹಿಂಸಿಸುವ ಅರಣ್ಯಾಧಿಕಾರಿಯ ತಪ್ಪು ನೀತಿಯಿಂದ ಅರಣ್ಯವಾಸಿಗಳಿಗೆ ಅನ್ಯಾಯವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಶಿರಸಿಯಲ್ಲಿ ನಂ.11 ರಂದು ಸಮಾಲೋಚನೆ ಸಭೆಯನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು. ಅವರು ಕಾರವಾರ ಪತ್ರಿಕಾ ಭವನದಲ್ಲಿ ಶನಿವಾರ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.