ಹಳಿಯಾಳ : ಡಿ.13,14,15 ರಂದು ದಾಂಡೇಲಿಯಲ್ಲಿ ನಡೆಯಲಿರುವ 25ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾವು ನೀವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಮಾಜಿ ಶಾಸಕರಾದ ಸುನೀಲ ಹೆಗಡೆಯವರು ಕರೆ ನೀಡಿದ್ದಾರೆ. ಅವರು ಶನಿವಾರ ಸಂಜೆ 4:00 ಗಂಟೆ ಸುಮಾರಿಗೆ ಹಳಿಯಾಳ ಪಟ್ಟಣದಲ್ಲಿ ಮಾಧ್ಯಮದ ಮೂಲಕ ಕರೆ ನೀಡಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣ ಸಮ್ಮೇಳನವನ್ನಾಗಿಸಲು ನಾವೆಲ್ಲ ಕನ್ನಡಿಗರು ಒಂದಾಗಿ ಶ್ರಮಿಸಬೇಕೆಂದು ಕರೆ ನೀಡಿದರು.