ಗುಂಡ್ಲುಪೇಟೆ: ತೆರಕಣಾಂಬಿ ಸಮೀಪ ಅಧಿಕ ಭಾರ ಹೊತ್ತು ಸಾಗುತ್ತಿದ್ದ 3 ಟಿಪ್ಪರ್ ವಶಕ್ಕೆ
ಅಧಿಕ ಭಾರ ಹೊತ್ತು ಹಾಗೂ ನಿಯಮಗಳನ್ನು ಗಾಳಿಗೆ ತೂರಿ ಬೋಡ್ರಸ್ ಸಾಗಿಸುತ್ತಿದ್ದ 3 ಟಿಪ್ಪರ್ಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪಟ್ಟಣ ಮತ್ತು ತೆರಕಣಾಂಬಿ ಪೊಲೀಸ್ ಠಾಣೆ ವಶಕ್ಕೆ ನೀಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಾಗಮಧು ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ತೆರಕಣಾಂಬಿ ಮಾರ್ಗವಾಗಿ ನಿಯಮ ಬಾಹಿರವಾಗಿ ಅಧಿಕ ಭಾರದ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಗುಂಡ್ಲುಪೇಟೆ ಠಾಣೆಗೆ ಒಂದು ಟಿಪ್ಪರ್ ಮತ್ತು ತೆರಕಣಾಂಬಿ ಪೊಲೀಸ್ ಠಾಣೆ ವಶಕ್ಕೆ ಎರಡು ಟಿಪ್ಪರ್ಗಳನ್ನು ನೀಡಿದ್ದಾರೆ.