ಚಾಮರಾಜನಗರ ಜಿಲ್ಲೆಯ ಯಳಂದೂರು ಠಾಣಾ ವ್ಯಾಪ್ತಿಯ ಮಲಾರಪಾಳ್ಯ ಗ್ರಾಮದಲ್ಲಿ ಇರುವ ಕಬಿನಿ ಚಾನೆಲ್ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಗಂಡಸಿನ ಶವದ ಗುರುತು ಪತ್ತೆ ಮಾಡುವಲ್ಲಿ ಯಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸುಮಾರು 50–55 ವರ್ಷದ ವ್ಯಕ್ತಿಯ ಶವವು ನೀರಿಗೆ ಬಿದ್ದು ಮೃತಪಟ್ಟ ಪರಿಣಾಮ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಆರಂಭದಲ್ಲಿ ಮೃತನ ಗುರುತು ತಿಳಿದುಬರಲಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಯಳಂದೂರು ಪೊಲೀಸರು ತನಿಖೆ ಮುಂದುವರೆಸಿದ್ದರು ಕೊನೆಗೂ ಮಂಗಳವಾರದಂದು ಮೃತ ವ್ಯಕ್ತಿ ಮಲ್ಲೇಶ್ ಎಂದು ಗುರುತಿಸುವಲ್ಲಿ ಯಶಸ್ವಿಯಾದರು. ---