ಬೆಂಗಳೂರು ಉತ್ತರ: KSRTC ಚಾಲಕನ ಕನ್ನಡ ಪ್ರೇಮಕ್ಕೆ ಸಲಾಂ! ಸ್ಯಾಟಲೈಟ್ ಇಂದ ಸಾಂಸ್ಕೃತಿಕ ನಗರಿಗೆ ಕನ್ನಡ ತೇರು!
KSRTC ಚಾಲಕನ ಕನ್ನಡ ಪ್ರೇಮಕ್ಕೆ ಸಿಟಿ ಮಂದಿ ಸಲಾಂ ಅಂತಿದ್ದಾರೆ. ನವೆಂಬರ್ 12 ಬೆಳಗ್ಗೆ ಏಳು ಗಂಟೆಗೆ ಸ್ಯಾಟಲೈಟ್ ಇಂದ ಮೈಸೂರಿಗೆ ಹೊರಟ ಕೆಎಸ್ಆರ್ಟಿಸಿ ಬಸ್ ಎಲ್ಲರ ಕಣ್ಮನ ಸೆಳೆಯುತ್ತಿದೆ. ಕನ್ನಡದ ಹಿರಿಯ ಸಾಹಿತಿಗಳು ಕ್ರೀಡಾಪಟುಗಳು ಪ್ರತಿ ಜಿಲ್ಲೆಯ ಮಹತ್ವವನ್ನು ಕೂಡ ಬಸ್ನಲ್ಲಿ ಉಲ್ಲೇಖಿಸಲಾಗಿದೆ. 50,000 ಖರ್ಚು ಮಾಡಿ ಚಾಲಕ ಮೆರೆದ ಕನ್ನಡ ಪ್ರೇಮ ನಿಜಕ್ಕೂ ಶ್ಲಾಘನೀಯ.