ಭಾರತರತ್ನ, ಸಂವಿಧಾನ ಶಿಲ್ಪಿ ಹಾಗೂ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನ ಹಿನ್ನಲೆ ಪಟ್ಟಣದಲ್ಲಿ ಶನಿವಾರ ರಾತ್ರಿ ದಲಿತ ಸಂಘಟನೆ ವತಿಯಿಂದ ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಸಲಾಯಿತು. ಲೊಕ್ಕನಹಳ್ಳಿ ರಸ್ತೆಯಲ್ಲಿ ಸಮುದಾಯ ಭವನ ಸಮೀಪ ಜಮಾಯಿಸಿದ ನೂರಾರು ಮಂದಿ ಮೊಂಬತ್ತಿ ಬೆಳಗಿ ಅಂಬೇಡ್ಕರ್ ಅವರಿಗೆ ಬುದ್ಧ ವಂದನೆ ಸಲ್ಲಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು