ಚಡಚಣ: ಪಟ್ಟಣದ ಬ್ಯಾಂಕ್ ನಲ್ಲಿ ಚಿನ್ನಾಭರಣ ಅಡವಿಟ್ಟ ಸುಶೀಲಾ ಅಜ್ಜಿ ಬ್ಯಾಂಕಿನ ಮುಂದೆ ನಿಂತು ಕಣ್ಣೀರು
ವಿಜಯಪುರ ಜಿಲ್ಲೆಯ ಚಡಚಣ ಪಡ್ಟಣದ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕರಣ ಸದ್ಯ ಬ್ಯಾಂಕಿನ ಗ್ರಾಹಕರನ್ನು ಕಂಗಾಲಾಗಿಸಿದೆ.ದರೋಡೆ ಪ್ರಕರಣದ ವಿಷಯ ತಿಳಿಯುತ್ತಿದ್ದಂತೆಯೆ ಬುದುವಾರ ಮಧ್ಯಾಹ್ನ 2ಗಂಟೆ ಸುಮಾರಿಗೆ ಸುಶಿಲಾ ಅನ್ನುವ ಅಜ್ಜಿ ಒಬ್ಬರು ಬ್ಯಾಂಕಿಗೆ ಧಾವಿಸಿದ್ದು ಬ್ಯಾಂಕಿನ ಲಾಕರ್ ನಲ್ಲಿ ಇಟ್ಟಿದ್ದ ಚಿನ್ನ ಮತ್ತು ಹಣದ ಕತೆ ಏನಾಗಿದೆ ಯಾರಾದರೂ ಹೇಳಿ ಎಂದು ಕಣ್ಣೀರು ಹಾಕಿದ ಘಟನೆ ನಡೆದಿದೆ.ಇನ್ನು ಬ್ಯಾಂಕಿನಲ್ಲಿ ನಾನು 350 ಗ್ರಾಂ ಬಂಗಾರವನ್ನು ಅಡವಿಟ್ಟಿದೆ ಎಂದು ಅಜ್ಜಿ ಮಾಧ್ಯಮಕ್ಕೆ ಹೇಳಿಕೆ ನೀಡಿದಳು. ವಿಜಯಪುರ ಪೋಲಿಸರು ತನಿಖೆ ನಡೆಸುತ್ತಿದ್ದು ತನಿಖೆಯ ಬಳಿಕವಷ್ಟೇ ಯಾವ ಯಾವ ಗ್ರಾಹಕರ ಚಿನ್ನ ಹಾಗೂ ಲಾಕರ್ ನಲ್ಲಿ ಇಟ್ಟಿದ್ದ ಹಣ ದರೋಡೆಯಾಗಿದೆ ಎಂದು ತಿಳಿದು ಬರಬೇಕಿದೆ.