ಬೆಂಗಳೂರು ಪೂರ್ವ: ಗುಂಡಿ ಮುಕ್ತ ರಸ್ತೆಗಳನ್ನಾಗಿಸಲು ಇಂಜಿನಿಯರ್ಗಳು ಶ್ರಮವಹಿಸಿ - ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುಂಡಿಮುಕ್ತ ರಸ್ತೆಗಳನ್ನ ನಿರ್ಮಿಸಲು ವಾರ್ಡ್ ಮಟ್ಟದ ಎಲ್ಲಾ ಇಂಜಿನಿಯರ್ಗಳು ಹೆಚ್ಚಿನ ಶ್ರಮವಹಿಸಿ ಕಾರ್ಯನಿರ್ವಹಿಸಿ ಎಂದು ಆಯುಕ್ತ ಡಿ.ಎಸ್.ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸೆಪ್ಟೆಂಬರ್ 17ರಂದು ಸಂಜೆ 5 ಗಂಟೆಗೆ ದೊಡ್ಡನೆಕ್ಕುಂದಿ ವ್ಯಾಪ್ತಿಯ ಎಇಸಿಎಸ್ ಬಡಾವಣೆಯಲ್ಲಿನ ರಸ್ತೆ ಗುಂಡಿಗಳ ಮುಚ್ಚುವ ಕಾರ್ಯವನ್ನ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ದಾನನಾಯಕ್, ಎಕ್ಸಿಕ್ಯುಟಿವ್ ಇಂಜಿನಿಯರ್ ರವಿಕುಮಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಜ್ಯೋತಿ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.