ನಗರದಲ್ಲಿ ಕಣ್ಮನ ಸೆಳೆದ ಅಗ್ನಿವೀರರ ಪಥ ಸಂಚಲನ. 31 ವಾರಗಳ ಕಠಿಣ ತರಬೇತಿಯ ನಂತರ ನಡೆದ ನಿರ್ಗಮನ ಪಥಸಂಚಲನದಲ್ಲಿ ಅಗ್ನಿವೀರರು ಪಾಲ್ಗೊಂಡಿದ್ದರು ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್ದೀಪ್ ಮುಖರ್ಜಿ ಅವರು ಶಪಥ ಪರೇಡ್ ಪರಿಶೀಲಿಸಿ, ಅಗ್ನಿವೀರರ ಕವಾಯತನ್ನು ಶ್ಲಾಘಿಸಿದರು ನಗರದ ಮರಾಠಾ ಲಘು ಪದಾತಿ ದಳದಲ್ಲಿ ಬುಧವಾರ 400ಕ್ಕೂ ಅಧಿಕ ಅಗ್ನಿವೀರರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಶಪಥ ಸ್ವೀಕರಿಸಿದರು.