ಇಂಡಿಗೋ ವಿಮಾನಗಳಲ್ಲಿ ಪೈಲಟ್ಗಳ ಕೊರತೆ ದೇಶದ್ಯಾಂತ ವಿಮಾನಗಳ ರದ್ದು ಆಗಿದ್ದು ಈ ಹಿನ್ನೆಲೆಯಲ್ಲಿ ವಧು-ವರರೇ ಇಲ್ಲದೆ ಹುಬ್ಬಳ್ಳಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರತಕ್ಷತೆ ಮಾಡಲಾಗಿದೆ. ಹೌದು ಇಂಡಿಗೋ ಏರ್ಲೈನ್ಸ್ ರದ್ದುಗೊಳಿಸಿದ ಪರಿಣಾಮ ಹುಬ್ಬಳ್ಳಿಯಲ್ಲಿ ನಡೆಯಬೇಕಾಗಿದ್ದ ನೂತನ ವಧು-ವರರ ಆರತಕ್ಷತೆ ಮದುಮಕ್ಕಳೇ ಬರಲು ಆಗದೆ, ಆನ್ಲೈನ್ ಮೂಲಕವೇ ಆರತಕ್ಷತೆಯನ್ನು ಮಾಡಲಾಗಿದೆ. ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಭುವನೇಶ್ವರದ ಸಂಗಮ ದಾಸ್ ನವೆಂಬರ್ 23 ರಂದು ಮದುವೆಯಾಗಿತ್ತು ಹುಬ್ಬಳ್ಳಿ ರಿಸೆಪ್ಶನ್ ಇಟ್ಟುಕೊಳ್ಳಲಾಗಿತ್ತು ಆದರೆ ವಿಮಾನ ಏಕಾಏಕಿ ವಿಳಂಬ ಆಗಿದ್ದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಆರತಕ್ಷತೆ ಮಾಡಲಾಗಿದೆ.