ದೇವದುರ್ಗ: ನನ್ನ ಮಗಳನ್ನು ಜೊತೆಯಲ್ಲಿ ಹೋಗಿದ್ದ ಇಬ್ಬರೇ ಕೊಲೆ ಮಾಡಿದ್ದಾರೆ,ಕೆ.ಇರಬಗೇರಾ ಗ್ರಾಮದ ಯುವತಿ ಸಾವಿನ ಕುರಿತು ಯುವತಿ ತಾಯಿ ಆರೋಪ
ಕಳೆದ ಎರಡು ದಿನಗಳ ಹಿಂದೆ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಕೆ.ಇರಾಬಗೇರಾ ಗ್ರಾಮದಲ್ಲಿನ ಮೂರು ಜನ ಯುವತಿಯರು ಆತ್ಮಹತ್ಯೆಗೆ ಯತ್ನಿಸಿತು ಅದರಲ್ಲಿ ರೇಣುಕಾ ಎನ್ನುವ ಯುವತಿ ಸಾವನ್ನಪ್ಪಿದ್ದು ಇನ್ನುಳಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ಕುರಿತು ಮೃತ ಯುವತಿಯ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳ ಜೊತೆಯಲ್ಲಿ ಹೋಗಿದ್ದ ಇಬ್ಬರೇ ಅವಳಿಗೆ ವಿಷಯ ಕೊಡಿಸಿ ಬಾವಿಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಯುವತಿಯ ಸಾವು ಹೇಗಾಗಿದೆ ಎನ್ನುವುದು ಪೋಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.