ಬಂಗಾರಪೇಟೆ: ತಾಲೂಕಿನ ಕದರಿನತ್ತ ಸುತ್ತಮುತ್ತಲ ಗ್ರಾಮಗಳಿಗೆ ಕಾಡಾನೆ ಹಾವಳಿ
ಕಾಡಾನೆಗಳ ಹಾವಳಿಯಿಂದಾಗಿ ರೈತರು ಬೆಳೆದ ಬೆಳೆಗಳು ವ್ಯಾಪಕವಾಗಿ ನಾಶವಾಗುತ್ತಿದ್ದು, ಇದು ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬರುವ ಆನೆಗಳು ರೈತರ ಜಮೀನುಗಳಿಗೆ ಲಗ್ಗೆ ಇಟ್ಟು,ಅಪಾರ ಪ್ರಮಾಣದ ಬೆಳೆಯನ್ನು ನಾಶಪಡಿಸುತ್ತಿವೆ.ಇದು ಮಾನವ ಮತ್ತು ವನ್ಯಜೀವಿ ಸಂಘರ್ಷದ ಒಂದು ಗಂಭೀರ ಸ್ವರೂಪವಾಗಿದ್ದು,ರೈತರ ಆರ್ಥಿಕ ಸ್ಥಿತಿಯ ಮೇಲೆ ಕರಿನೆರಳು ಚಾಚಿದೆ.ತಾಲ್ಲೂಕಿನ ಗಡಿ ಭಾಗದಲ್ಲಿನ ಕದಿರಿನತ್ತ ಗ್ರಾಮದ ಮನೆಗಳಿಗೆ ಗದ್ದೆಗಳನ್ನು ಕಳೆದ ಎರಡು ರಾತ್ರಿಗಳಿಂದ ಒಂಟಿ ಆನೆ ದಾಳಿ ಮಾಡಿ ಭತ್ತವನ್ನು ತಿಂದು,ತುಳಿದು ನಾಶ ಮಾಡಿದ್ದು, ಇದರಿಂದಾಗಿ ಅವರಿಗೆ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು,ಗ್ರಾಮದ ಇನ್ನೂ ಉಳಿದ ರೈತರು ಸಹ ಒಂಟಿ ಆನೆಯ ಬರುತ್ತಿವೆ ಎಂದು ಅಳಲನ್ನ ತೋಡಿಕೊಂಡಿದ್ದಾರೆ