ಕೊಳ್ಳೇಗಾಲ: ದೊಡ್ಡಿಂದುವಾಡಿ ಬಳಿ ರಸ್ತೆ ಅಭಿವೃದ್ಧಿಗಾಗಿ ರೈತರಿಂದ ಭಿಕ್ಷಾಟನೆ ಬೆನ್ನಲ್ಲೆ ಕ್ರಮಕ್ಕೆ ಮುಂದಾದ ಇಲಾಖೆ; ರೈತ ಸಂಘಟನೆ ಹರ್ಷ
ಕೊಳ್ಳೇಗಾಲ: ತಾಲೂಕಿನ ಕೆಲವು ಗ್ರಾಮಗಳ ರಸ್ತೆ ಅಭಿವೃದ್ಧಿಯ ಬೇಡಿಕೆಯ ಹಿನ್ನೆಲೆಯಲ್ಲಿ ಭಿಕ್ಷಾಟನೆ ನಡೆಸಿದ್ದ ರೈತ ಸಂಘಟನೆಯ ಚಳುವಳಿ ಪರಿಣಾಮಕಾರಿಯಾಗಿದ್ದು, ಇದೀಗ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದಾರೆ ಎಂದು ರೈತ ಸಂಘಟನೆ ಸಂತೋಷ ವ್ಯಕ್ತಪಡಿಸಿದೆ. ಈ ಕುರಿತು ರೈತ ಮುಖಂಡ ಶೈಲೇಂದ್ರ ಕುಮಾರ್ ಮಾತನಾಡಿ, ತಾಲೂಕಿನ ಮದುವನಹಳ್ಳಿ ಮುಖ್ಯರಸ್ತೆಯೊಂದಿಗೆ ಹಲವು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿಒತ್ತಾಯಿಸುತ್ತಿದ್ದರೂ ಫಲಿತಾಂಶ ಕಂಡುಬರದೇ ಇರುವುದರಿಂದ, ಕಳೆದ ನವೆಂಬರ್ 24ರಂದು ರೈತ ಸಂಘದ ವತಿಯಿಂದ ಪ್ರತಿಭಟನೆಯ ರೂಪವಾಗಿ ಭಿಕ್ಷಾಟನೆ ನಡೆಸಲಾಗಿತ್ತುಅಂತೆಯೆ ದೊಡ್ಡಿಂದುವಾಡಿ ಹಾಗೂ ಸಿಂಗನಲ್ಲೂರಿನಲ್ಲಿ ರೈತರು ಭಿಕ್ಷೆ ಸಂಗ್ರಹಿಸಲಾಗಿತ್ತೂ ಕೊನೆಗೂ ಅಧಿಕಾರಿಗಳು ಕ್ರಮಕ್ಕೆ ಒತ್ತಾಯಿಸಿದರು