ಯಾದಗಿರಿ: ಒಂದು ಧರ್ಮ ಬಿಟ್ಟು ಹೋದವರನ್ನು ಮತ್ತೆ ಹಿಂದಿನ ಧರ್ಮದವರು ಎನ್ನುವುದು ಸರಿಯಲ್ಲ, ನಗರದಲ್ಲಿ ವಿ.ಪ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿಕೆ
Yadgir, Yadgir | Sep 16, 2025 ಒಂದು ಧರ್ಮವನ್ನು ಬಿಟ್ಟು ಮತ್ತೊಂದು ಧರ್ಮಕ್ಕೆ ಹೋದವರನ್ನು ಹಿಂದಿನ ಧರ್ಮದ ಹೆಸರಿನಲ್ಲಿ ಕರೆಯುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾದಗಿರಿ ನಗರದಲ್ಲಿ ಮಂಗಳವಾರ ಮಧ್ಯಾನ ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಹಿಂದೂ ಧರ್ಮದಲ್ಲಿನ ಒಂದು ಜಾತಿಯಲ್ಲಿ ಗುರುತಿಸಿಕೊಂಡವರು ಕ್ರೈಸ್ತ ಧರ್ಮಕ್ಕೆ ಬಂದಾಗ ಅವರನ್ನು ಕೇವಲ ಕ್ರೈಸ್ತರಾಗಿ ನೋಡಬೇಕೆ ವಿನಃ ಹಿಂದಿನ ಧರ್ಮದ ಜಾತಿಯ ಹೆಸರಿನಲ್ಲಿ ಕರೆಯುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.