ಹುಬ್ಬಳ್ಳಿ: ಓರ್ವ ಚಿನ್ನದ ವ್ಯಾಪಾರಿಯಿಂದ ಐದಾರು ಜನರ ತಂಡವೊಂದು 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂ. ನಗದು ಹಣವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಅಂಕುಶ, ಚಂದ್ರಶೇಖರ, ಜಿನ್ನೇಶಕುಮಾರ, ವಿಲಾಸ ಎಂಬಾತರೆ ಬಂಧಿತ ಆರೋಪಿಗಳು. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣದ ತನಿಖೆಯನ್ನು ಸಿಸಿಬಿ ವಿಭಾಗಕ್ಕೆ ಹಸ್ತಾಂತರಿಸಿದಾಗ ಉತ್ತರ ಪ್ರದೇಶದ ಘೋರಕಪೂರ ಪಟ್ಟಣದಲ್ಲಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬಂಧಿತರಿಂದ 6.65.284 ರೂ. ಬೆಲೆಬಾಳುವ 56.26 ಗ್ರಾಂ ಚಿನ್ನದ ಒಡವೆಗಳು, 60,000 ರೂ. ನಗದು ಹಣ ಹಾಗೂ 7 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ