ಬಾಗಲಕೋಟೆ: ಖಜ್ಜಿಡೋಣಿ ಗ್ರಾಮದಲ್ಲಿ ವ್ಯಕ್ತಿ ನೇಣಿಗೆ ಶರಣು
ವಿವಿಧ ಬ್ಯಾಂಕಗಳಲ್ಲಿ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಅತ್ಮ ಹತ್ಯೆ ಮಾಡಿಕೊಂಡ ವ್ಯಕ್ತಿಯನ್ನ ಖಜ್ಜಿಡೋಣಿ ಗ್ರಾಮದ ಲಕ್ಷಮಣ ಆನಂದಿ(43) ಎಂದು ಗುರ್ತಿಸಲಾಗಿದೆ.ವಿವಿಧ ಬ್ಯಾಂಕಗಳಲ್ಲಿ ಅಂದಾಜು ಎರಡು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಹಾಗು ಹಲವರ ಬಳಿ ಕೈಗಡ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಸಾಲ ಮರು ಪಾವತಿಸಲಾಗದೇ ಮಾನಸಿಕವಾಗಿ ನೊಂದು ರಾಯಚೂರು ಬೆಳಗಾವಿ ಹೆದ್ದಾರಿ ಪಕ್ಕದಲ್ಲಿರುವ ಹಳ್ಳದ ಬಳಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈತ ಖಜ್ಜಿಡೋಣಿ ಗ್ರಾಮದ ಪಂಚಾಯಿತಿ ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ.ಕಲಾದಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ