ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಶ್ರೀಗಂಧಮರ ಕಡಿದಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ ಹಗ್ಗದಹಳ್ಳ ಗ್ರಾಮದ ಕುಮಾರ್, ,ಸಿದ್ದರಾಜು,ಬಸವರಾಜು, ಗೋಪಾಲ್ ಬಂಧಿತರಾಗಿದ್ದು ರಮೇಶ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಮದ್ದೂರು ವಲಯದ ಅರಣ್ಯದಲ್ಲಿ ಶ್ರೀಗಂಧ ಮರ ಕತ್ತರಿಸಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದು ದಾಳಿ ಮಾಡಿ ಬಂಧಿಸಿ ಟಾಟಾ ಏಸ್ ವಾಹನ, 50 ಸಾವಿರ ನಗದು, ಒಂದು ಬೈಕ್, ಮೂರು ಶ್ರೀಗಂಧ ತುಂಡು ವಶಕ್ಕೆ ಪಡೆಯಲಾಗಿದೆ.