ತುಮಕೂರು: ಜಿ ಎಸ್ ಟಿ ಪರಿಷ್ಕರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬೇಜವಾಬ್ದಾರಿ ಹೇಳಿಕೆ : ನಗರದಲ್ಲಿ ಕೇಂದ್ರ ಸಚಿವ ಸೋಮಣ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಎಸ್ ಟಿ. ಪರಿಷ್ಕರಣೆ ಕುರಿತ ಹೇಳಿಕೆಯು ಬೇಜವಾಬ್ದಾರಿ ಹಾಗೂ ಜಡತ್ವದ್ದಾಗಿದೆ ಎಂದು ಕೇಂದ್ರದ ಜಲ ಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಜರಿದರು. ತುಮಕೂರು ನಗರದ ಅರ್ಬನ್ ರೆಸಾರ್ಟ್ ಸಭಾಂಗಣದಲ್ಲಿ ಬುಧವಾರ ಸಂಜೆ 6 ರ ಸಮಯದಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆವತಿಯಿಂದ ಜಿ ಎಸ್ ಟಿ 2.0 -2025 ಪರಿಷ್ಕರಣೆ, ಪರಿಹಾರ, ಸರಳೀಕರಣ ಹಾಗೂ ವಾಣಿಜ್ಯ ಉತ್ತೇಜನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಜಿಎಸ್ ಟಿ ಪರಿಷ್ಕರಣೆಗೆ ದೇಶದ 36 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಒಪ್ಪಿಗೆ ಸೂಚಿಸಿವೆ. ಸಭೆಯಲ್ಲಿದ್ದ ರಾಜ್ಯ ಸರ್ಕಾರದ ಪ್ರತಿನಿಧಿ ಜಿ ಎಸ್ ಟಿ ಪರಿಷ್ಕರಣೆ ಸಮಂಜಸ ಎಂದು ಸಹಿ ಹಾಕಿದ್ದಾರೆ ಎಂದರು.