ದಿವ್ಯಾಂಗ ಬಡ ವ್ಯಾಪಾರಿಯಿಂದ ಭೂ ಬಾಡಿಗೆ ವಸೂಲಿ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆಸೀಫ್ ಸೇಠ್. ಬೆಳಗಾವಿ ಮಹಾನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವ ದಿವ್ಯಾಂಗರಿಂದ ತೆರಿಗೆ ಪಡೆಯಬಾರದೆಂಬ ನಿಯಮವಿದ್ದರೂ ಸಹ ಖಾಸಗಿ ಗುತ್ತಿಗೆದಾರರು ಭೂತೆರಿಗೆ ಪಡೆಯುತ್ತಿದ್ದು, ಈ ಕುರಿತು ದಿವ್ಯಾಂಗನೊಬ್ಬ ಮಂಗಳವಾರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲೇ ದೂರು ನೀಡಲೂ ಆಗಮಿಸಿದ್ದರು. ಖಾಸಗಿ ತೆರಿಗೆ ಸಂಗ್ರಹಣ ಗುತ್ತಿಗೆದಾರರು ದಿವ್ಯಾಂಗರ ಬಡ ವ್ಯಾಪಾರಿಗಳಿಂದ ಭೂ ತೆರಿಗೆ ವಸೂಲಿ ಮಾಡಿದ ನೀತಿಗೆ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಶಾಸಕ ಆಸೀಫ್ ಸೇಠ್ ತರಾಟೆಗೆ ತೆಗೆದುಕೊಂಡರು