ಹಾಸನ: ಒಂದೇ ಕುಟುಂಬದ ಮೂರನೇ ಸದಸ್ಯನಿಗೆ ಹಾಸನ ಮಹಾನಗರ ಪಾಲಿಕೆಯ ಚುಕ್ಕಾಣಿ: ಹೊಸ ಇತಿಹಾಸ ಬರೆದ ಚೆನ್ನವೀರಪ್ಪ ಕುಟುಂಬ
Hassan, Hassan | Sep 17, 2025 ಹಾಸನ: ಹಾಸನ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಗಿರೀಶ್ ಚನ್ನವೀರಪ್ಪ ಇಂದು ಅವಿ ರೋಧವಾಗಿ ಆಯ್ಕೆಯಾಗಿದ್ದು ಇಲ್ಲಿಗೆ ಒಂದೇ ಕುಟುಂಬದ ಮೂರನೇ ಸದಸ್ಯ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಮೈಸೂರಿನ ಪ್ರಾದೇಶಿಕ ಆಯುಕ್ತ ವೆಂಕಟೇಶ್ವರ ರಾಜು ನೇತೃತ್ವದಲ್ಲಿ ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆದು ಗಿರೀಶ್ ಚನ್ನವೀರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 2001 ರಿಂದ 2003 ತಂದೆ ಚನ್ನವೀರಪ್ಪ, 2010=11 ಪತ್ನಿ ನೇತ್ರಾವತಿ, 2025 ರಿಂದ ಗಿರೀಶ್ ಚನ್ನವೀರಪ್ಪ ಅಧಿಕಾರ ಹಿಡಿಯುವ ಮೂಲಕ ಹಾಸನ ಜಿಲ್ಲೆಯ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.