ಗುಂಡ್ಲುಪೇಟೆ: ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಲು ವಿಳಂಬ ಧೋರಣೆ; ಪಟ್ಟಣದಲ್ಲಿ ರೈತ ಮುಖಂಡ ನಾಗಾರ್ಜುನ ಆಕ್ರೋಶ
ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಹಾಗೂ ಕೃಷಿ ಸಚಿವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೈತ ಮುಖಂಡ ನಾಗಾರ್ಜುನ ಕಿಡಿಕಾರಿದರು. ಪಟ್ಟಣದ ಎಪಿಎಂಸಿ ಕಚೇರಿ ಆವರಣದಲ್ಲಿ ರೈತ ಮುಖಂಡ ನಾಗಾರ್ಜುನ್ ಕುಮಾರ್ ಮಾತನಾಡಿ, ಸೂರ್ಯಕಾಂತಿ ಉದ್ದು, ಹೆಸರಕಾಳು, ಶೇಂಗಾ, ಸೋಯಾಬಿನ್ ಕಾಳುಗಳಿಗೆ ಖರೀದಿ ಕೇಂದ್ರ ತೆರೆಯುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಿದ್ದರು ಕೂಡ ಸಹ ಕೇಂದ್ರ ಸರ್ಕಾರ ಖರೀದಿ ಕೇಂದ್ರ ತೆರೆಯದೆ ಸುಮಾರು ಎರಡು ಲಕ್ಷ ರೈತ ಕುಟುಂಬಗಳಿಗೆ ಅನ್ಯಾಯ ಮಾಡಿ ಕಾರ್ಪೊರೇಟ್ ಸ್ನೇಹಿಯಾಗಿ ರೈತ ವಿರೋಧಿ ನೀತಿ ಅನುಸರಿಸುತಿದ್ದಾರೆ ಎಂದು ಆರೋಪಿಸಿದರು.