ಬೆಂಗಳೂರು ಉತ್ತರ: ಮಲಗಿದ್ದಾಗ ಮನೆಯೊಳಗೆ ನುಗ್ಗಿದ ಲಾರಿ! ಆದಂತಹ ಅವಾಂತರ ಏನು? ನಗರ ಪೊಲೀಸರಿಗೆ ಜನರ ಮನವಿ ಏನು?
ತಡರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮನೆಯೊಳಗೆ ದೊಡ್ಡ ಲಾರಿ ನುಗಿರುವಂತಹ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯ ಮುಂಭಾಗದ ಕಾಂಪೌಂಡ್ ಸಂಪೂರ್ಣವಾಗಿ ಕುಸಿತ ಆಗಿದ್ದು ಗಾಡಿಗಳು ನಜ್ಜು ಗುಜ್ಜು ಆಗಿದೆ. ಲಾರಿ ಚಾಲಕನ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯರು ನಗರ ಪೊಲೀಸ್ ಕಮಿಷನರ್ ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.