ಚಿತ್ರದುರ್ಗ: ಈರುಳ್ಳಿ ಬೆಲೆಯಲ್ಲಿ ಕುಸಿತದಿಂದ ಸೊಂಡೆಕೆರೆ ಗ್ರಾಮದಲ್ಲಿ ರೈತ ಕಂಗಾಲು
ಈರುಳ್ಳಿ ಬೆಲೆಯಲ್ಲಿ ಕುಸಿತ ಹಿನ್ನೆಲೆ ಸೊಂಡೆಕೆರೆ ಗ್ರಾಮದ ರೈತ ಕಂಗಾಲಾಗಿದ್ದಾನೆ. ಬುದವಾರ ಮಧ್ಯಾಹ್ನ 1 ಗಂಟೆಗೆ ದೃಶ್ಯ ಕಂಡು ಬಂದಿದ್ದು ಈರುಳ್ಳಿ ಬೆಲೆ ಪಾತಳಕ್ಕೆ ಕುಸಿದ ಕಂಡಿದ್ದು ಸಾಲದ ಸುಳಿಗೆ ಸಿಲುಕಿ ಪಾಯಿಸನ್ ಬಾಟಲ್ ಹಿಡಿದ ರೈತ ತನ್ನ ಅಳಲನ್ನ ತೋಡಿಕೊಂಡಿದ್ದಾನೆ. ಜಿಲ್ಲೆಯಲ್ಲಿ ಈರುಳ್ಳಿ ಕಟಾವು ನಡೆದಿದ್ದು ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. 50 ಕೆ.ಜಿ ಈರುಳ್ಳಿ ಪಾಕೆಟ್ ಕೇವಲ 50 ರಿಂದ 200 ದರಕ್ಕೆ ಮಾರಟವಾಗುತ್ತಿದ್ದು ರೈತರನ್ನು ನಷ್ಟಕ್ಕೆ ದೂಡಿದ್ದು ಸಾಲದ ಸುಳಿಗೆ ಸಿಲುಕಿ ರೈತರು ಕಂಗಾಲಾಗಿದ್ದಾರೆ