ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಬುಧುವಾರ 12 ಗಂಟೆಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಚಳಿಗಾಲದ ಅಧಿವೇಶನದಲ್ಲಿ ಶಾಸಕರುಗಳಿಗೆ ಭತ್ಯೆ ಜೊತೆ ಊಟ,ಉಪಹಾರ ನೀಡದಂತೆ ಆಗ್ರಹಿಸಿದರು ಪ್ರತಿ ಅಧಿವೇಶನದಲ್ಲಿ 2500 ರೂ ಭತ್ಯೆ ನೀಡುವುದರ ಜೊತೆ ಊಟ ಉಪಹಾರ ನೀಡುತ್ತಿದ್ದು ಎರಡರಲ್ಲಿ ಒಂದನ್ನು ನೀಡುವಂತೆ ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ ಶಾಸಕರುಗಳಿಗೆ ಭತ್ಯೆ ಜೊತೆ ಊಟ ಉಪಹಾರ ನೀಡಿದರೆ ಕಾನೂನಾತ್ಮಕ ಹೋರಾಟ ಎಂದರು ಊಟ ಉಪಹಾರದ ಸಲುವಾಗಿಯೇ ಸಾರ್ವಜನಿಕರ ತೆರಿಗೆ ಹಣದಲ್ಲಿ ಊಟ,ಉಪಹಾರ ಉಚಿತವಾಗಿ ನೀಡುವುದು ಕಾನೂನು ಬಾಹಿರ ಎಂದ ಗಡಾದ ಆಕ್ರೋಶ ವ್ಯಕ್ತಪಡಿಸಿದರು.