ಯಲ್ಲಾಪುರ: ಮಾವಿನಕಟ್ಟಾದಲ್ಲಿ ತಂದೆಯನ್ನೇ ಕೊಂದ ಮಗ
ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾ ಸಮೀಪ ಬೆಳ್ಳಂಬಿಯಲ್ಲಿ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ನಡೆದಿದೆ. ಬೆಳ್ಳಂಬಿಯ ನಾರಾಯಣ ಪರಶುರಾಮ ಮರಾಠಿ(51) ಮೃತ ವ್ಯಕ್ತಿ. ಮೃತನ ಪುತ್ರ ಹರೀಶ ನಾರಾಯಣ ಮರಾಠಿ (29)ಕೊಲೆಗೈದ ವ್ಯಕ್ತಿ. ತಾರಾ ಹಾಗೂ ಈಕೆಯ ಅಣ್ಣ ಹರೀಶ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದು, ಹರೀಶನ ಹೆಂಡತಿ ಸವಿತಾ ಹಾಗೂ ತಾರಾಗೆ ಆಗಾಗ ಜಗಳ ನಡೆಯುತ್ತಿತ್ತು. ಅದರಂತೆ ಮನೆಯ ಅಂಗಳದಲ್ಲಿ ಕಸ ಕುಡಿಸುವಾಗ ಆರಂಭವಾದ ಜಗಳ ತಾರಕಕ್ಕೇರಿ ಅಣ್ಣ ಹರೀಶ, ತಂಗಿ ತಾರಾಳ ಕೆನ್ನೆಗೆ ಹೊಡೆದಿದ್ದಾನೆ ಇದರಿಂದ ರಕ್ತ ಬಂದಿದ್ದು, ಗಾಯಗೊಂಡ ಆಕೆ ಈ ವಿಷಯವನ್ನು ಹೊಲದಿಂದ ಬಂದ ತಂದೆ ನಾರಾಯಣ ಮರಾಠಿಗೆ ತಿಳಿಸಿದ್ದರಿಂದ ಕೋಪದಲ್ಲಿ ಮಗ ತಂದೆಯನ್ನಕೊಚ್ಚಿ ಕೊಂದಿದ್ದನೆ.