ಭಟ್ಕಳ: ಜಂಬೂರು ಮಠದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಭಟ್ಕಳ: ಜಂಬೂರು ಮಠದ ಕೆರೆಯಲ್ಲಿ ಈಜಲು ಹೋಗಿ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಕಂಡ ಘಟನೆ ನಡೆದಿದೆ.ತನ್ನ ಸ್ನೇಹಿತರ ಜೊತೆ ಶಶಿಧರ ಕೆರೆಗೆ ಈಜಲು ತೆರಳಿದ್ದು, ಅಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ವೆಂಕಟಾಪುರದ ಶಶಿಧರ್ ಯೋಗೇಷ್ ಮೊಗೇರ್ ಮೃತ ವಿದ್ಯಾರ್ಥಿಯಾಗಿದ್ದಾನೆ.ಮೃತ ವಿದ್ಯಾರ್ಥಿಯ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು ,ಈ ಕುರಿತು ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.