ಕೊರಟಗೆರೆ: ಜಾತಿಗಣತಿ ಸಮೀಕ್ಷೆ ಸಂದರ್ಭದಲ್ಲಿ ಕುಂಚಿಟಿಗ
ಎಂದೆ ನಮೂದಿಸಿ ಪಟ್ಟಣದಲ್ಲಿ ಹನುಮಂತನಾಥ ಸ್ವಾಮಿ ಮನವಿ
ಸೆಪ್ಟೆಂಬರ್ 22ರಿಂದ ಆರಂಭವಾಗುವ ಜಾತಿ ಗಣತಿಯಲ್ಲಿ ಕುಂಚಿಟಿಗ ಜನಾಂಗದವರು ತಮ್ಮ ಜಾತಿಯನ್ನು ಸ್ಪಷ್ಟವಾಗಿ ಕುಂಚಿಟಿಗ ಎಂದು ಬರೆಸಿ, ಸರ್ಕಾರ ನಿಗದಿಪಡಿಸಿರುವ A-0795 ಕೊಡ್ ಬಳಕೆಯಂತೆ ನಮೂದಿಸಿ ಎಂದು ಕುಂಚಿಟಿಗ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಮಂಗಳವಾರ ಸಂಜೆ 5 ಗಂಟೆಯಲ್ಲಿ ಮನವಿ ಮಾಡಿದರು. ತುಮಕೂರು ಜಿಲ್ಲೆಯ ಒಂಬತ್ತು ತಾಲ್ಲೂಕುಗಳು ಸೇರಿದಂತೆ ರಾಜ್ಯದ 19 ಜಿಲ್ಲೆಗಳ 48 ತಾಲ್ಲೂಕುಗಳಲ್ಲಿ ವಾಸಿಸುವ ಕುಂಚಿಟಿಗರು ಸಾಮಾನ್ಯವಾಗಿ ದನ-ಕುರಿ ಪೋಷಣೆಯನ್ನು ಆಧಾರ ಮಾಡಿಕೊಂಡಿದ್ದಾರೆ. “ನಮ್ಮಲ್ಲಿ ಉಪಜಾತಿ ಬೇಧವಿಲ್ಲ, ಎಲ್ಲರೂ ಒಂದೇ ಕುಂಚಿಟಿಗ ಎಂದು ಪರಿಗಣಿಸಬೇಕು” ಎಂದು ಮಾಜಿ ಜಿಪಂ ಸದಸ್ಯ ಶಿವರಾಮಣ್ಣ ತಿಳಿಸಿದರು.