ಕಲಬುರಗಿ : ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಹಿತ ನಾಲ್ವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ಘಟನ ಸ್ಥಳ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗೌನಹಳ್ಳಿ ಗ್ರಾಮಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.. ನ26 ರಂದು ಬೆಳಗ್ಗೆ 10.30 ಕ್ಕೆ ಕಲಬುರಗಿಯಿಂದ ಆಗಮಿಸಿದ ಎಫ್ಎಸ್ಎಲ್ ತಂಡ, ಭೀಕರ ಅಪಘಾತದಲ್ಲಿ ಬಿದ್ದಿರೋ ವಾಹನ, ಬಿಡಿಭಾಗಗಳು ಹಾಗೂ ಬೈಕ್ ಸವಾರ ಅಡ್ಡ ಬಂದ ಸ್ಥಳ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿ ವರದಿ ಸಂಗ್ರಹಿಸುತ್ತಿದ್ದಾರೆ..