ವಿಪಕ್ಷದವರಿಗೆ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತರ ನೀಡಲಾಗಿದೆ. ಆದರೂ ಸಹ ಇಲ್ಲಸಲ್ಲದ ವಿಚಾರಗಳನ್ನು ಕೆದಕುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು. ಕುಂದಕೆರೆ ಗ್ರಾಮದಲ್ಲಿ ಮಹದೇಶ್ವರ ದೇವಸ್ಥಾನದ ಕಾಂಪೌಂಡ್ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿ, 110 ಕೆರೆಗಳಿಗೆ ನೀರು ತುಂಬಿಸುವ ಪ್ರಸ್ತಾವನೆ ಬಿಜೆಪಿ ಅವಧಿಯಲ್ಲಿ ರಿಜೆಕ್ಟ್ ಆಗಿತ್ತು. ಅದನ್ನು ನಾವು ಅಧಿಕಾರಿಗಳೊಂದಿಗೆ ಮೂರು ಸುತ್ತಿನ ಸಭೆ ನಡೆಸಿ ಸಿಎಂ ಮತ್ತು ಡಿಸಿಎಂ ಮೇಲೆ ಒತ್ತಡ ಹಾಕಿ ಅಪ್ರೂವಲ್ ಮಾಡಿಸಿದ್ದೆವು. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಮುಕ್ತಾಯವಾಗಿದೆ. ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.