ನವಂಬರ್ 8 ರಂದು ರಾಯಚೂರು ನಗರದ ಗಂಜ್ ವೃತ್ತಿದಲ್ಲಿ ಇರುವ ಕನಕದಾಸ ಪುತ್ತಳಗೆ ಮಾಲಾರ್ಪಣೆ ಮಾಡಿ ಜಯಂತಿಗೆ ಚಾಲನೆ ನೀಡಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಸವಂತಪ್ಪ ಹೇಳಿದರು. ಈ ವೇಳೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಮುದಾಯದ ಮುಖಂಡರು ಕನಕದಾಸ ಪುತ್ತಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ, ವಿಶೇಷವಾಗಿ ಕುಂಭ, ಕಳಸ, ಡೊಳ್ಳು ಕುಣಿತ, ತಾಳ, ವಾದ್ಯ, ಜನಪ್ರದ ನೃತ್ಯ ಸೇರಿ, ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಆಚರಿಸಲಾಗುವುದು ಎಂದರು.