ಬಳ್ಳಾರಿ: ಸಿದ್ದರಾಮಯ್ಯನವರಿಂದ ವಾಲ್ಮೀಕಿ ಸಮುದಾಯ ತುಳಿಯುವ ಕುತಂತ್ರ:ನಗರದಲ್ಲಿ ಜೋಳದರಾಶಿ ತಿಮ್ಮಪ್ಪ ಆರೋಪ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವನ್ನು ತುಳಿಯುವ ಕುತಂತ್ರ ನಡೆಸಿದ್ದಾರೆ. ಅವರು ಅಹಿಂದ ನಾಯಕರಲ್ಲ ಬರೀ ಕುರುಬ ಸಮುದಾಯಕ್ಕೆ ನಾಯಕ ಎಂದು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಅಧ್ಯಕ್ಷ ಜೋಳದರಾಶಿ ತಿಮ್ಮಪ್ಪ ಆರೋಪ ಮಾಡಿದ್ದಾರೆ. ನಗರದಲ್ಲಿನ ಒಕ್ಕೂಟದ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ 11ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಅವರು. ಬರುವ ಜಾತಿ ಗಣತಿಯಲ್ಲಿ ನಮಗಮ ಸಮುದಾಯದ ಜನತೆ ಧರ್ಮದ ಕಾಲಂನಲ್ಲಿ ಹಿಂದು ಎಂದು. ಜಾತಿ ಕಾಲಂನಲ್ಲಿ ವಾಲ್ಮೀಕಿ ಎಂದಷ್ಟೇ ಬರೆಯಿಸಿ ಎಂದರು. ವಾಲ್ಮೀಕಿ ಸಮುದಾಯ ಮತ್ತು ಉಪ ಮುಖ್ಯ ಮಂತ್ರಿ. ಡಿ.ಕೆ. ಶಿವಕುಮಾರ್ ಅವರನ್ನು ತುಳಿಯಬೇಕು ಎಂಬುದೇ ಸಿಎಂ ಸಿದ್ದರಾಮಯ್ಯ ಅವರ ಉದ್ದೇಶ. ಕಾಂಗ್ರೆಸ್ ಪಕ್ಷಕ್ಕೆ ಈ ಉದ್ದೇಶ ಇಲ್ಲ ಎಂದರು.