ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಜನತೆಗೆ ಸರಿಯಾಗಿ ಉದ್ಯೋಗವನ್ನು ನೀಡುತ್ತಿಲ್ಲ ಸೇರಿದಂತೆ ಇನ್ನಿತರ ಹಕವು ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರಯ ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು ಪ್ರತಿಭಟನೆಯಲ್ಲಿ ಭಾಗಿಯಾದ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ,ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾರ್ವಜನಿಕರ ಸೇವೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಪ್ರಶ್ನೆ ಕೇಳುವವರ ಮೇಲೆ ಅಗೌರವತೊರುತ್ತಿದ್ದಾರೆ.ಎಂದು ಆರೋಪಿಸಿದೆಉ ನರೇಗಾ ಯೋಜನೆಯಡಿ ಸ್ಥಳೀಯ ನಿವಾಸಿಗಳಿಗೆ 100 ದಿನ ಕೆಲಸ ನೀಡಬೇಕೆಂಬ ನಿಯಮ ಇದ್ದರೂ, ಗಾಳಿಗೆ ತೂರಲಾಗಿದೆ ಎಂದರು