ಮಳವಳ್ಳಿ : ದೇಶದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಂದೋ ಸತ್ತು ಹೋಗಿದ್ದು ಅಂತಹ ಹೈಕಮಾಂಡ್ ಸೂಚನೆಯನ್ನು ನಾವಿಬ್ಬರು ಪಾಲಿಸುವುದಾಗಿ ಸಿ ಎಂ ಸಿದ್ದರಾಮಯ್ಯ ಡಿ ಸಿ ಎಂ ಡಿ ಕೆ ಶಿವಕುಮಾರ್ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದ್ದು ಜನರನ್ನು ವಂಚಿಸುವ ತಂತ್ರ ಎಂದು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾ ಯಣಸ್ವಾಮಿ ಟೀಕಿದ್ದಾರೆ. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಾಯಂಕಾಲ 5.30 ರ ಸಮಯ ದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿನ ಅಧಿಕಾರ ಹಂಚಿಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾ ರ್ಜುನ ಖರ್ಗೆ ಅವರೇ ಅಸಹಾಯಕರಾಗಿದ್ದಾರೆ ಎಂದರು.