ಕೆ ಆರ್ ಪೇಟೆ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಕೆ ಆರ್ ಪೇಟೆ ತಾಲ್ಲೂಕಿನ ಕಬ್ಬಲಗೆರೆ ಗ್ರಾಮದಲ್ಲಿ ಜರುಗಿದೆ. ಈ ಗ್ರಾಮದ ಈಶ್ವರಚಾರಿ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು ಶುಕ್ರವಾರ ಕುಟುಂಬ ದವರು ಮನೆ ದೇವರ ಕಾರ್ಯಕ್ಕೆ ತೆರಳಿದ್ದು ವಾಪಸ್ ಶನಿವಾರ ಬಂದು ನೋಡಿದಾಗ ಯಾರೋ ಕಳ್ಳರು ಮನೆ ಬೀಗ ಮುರಿದು ಒಳ ನುಗ್ಗಿ ಬೀರುವಿನಲ್ಲಿದ್ದ 1 ಲಕ್ಷದ 20 ಸಾವಿರ ರೂ ಮೌಲ್ಯದ ಒಂದು ಚಿನ್ನದ ಒಂದು ಜೊತೆ ಹ್ಯಾಂಗಿಂಗ್ ಮಕ್ಕಳ 5 ಉಂಗುರಗಳ ಜೊತೆ 26 ಸಾವಿರ ನಗದು ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಶನಿವಾರ ಸಂಜೆ 7.30 ರ ಸಮಯದಲ್ಲಿ ಈಶ್ವರ ಚಾರಿ ಅವರು ಕೆ ಆರ್ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.