ಚಾಮರಾಜನಗರ ತಾಲೂಕಿನ ಬೂದಿಪಡಗದ ಕಳ್ಳಬೇಟೆ ತಡೆ ಶಿಬಿರಕ್ಕೆ ಥಾರ್ ಜೀಪ್ ನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅರಣ್ಯದಲ್ಲೇ ಫೈರ್ ಕ್ಯಾಂಪ್ ಮಾಡಿದ್ದಾರೆ. ಬೆಂಗಳೂರಿನ ಹನುಮಂತನಗರದ ಹರ್ಷರಾಜ್, ಬ್ಯಾಟರಾಯನಪುರದ ಸತೀಶ್ ಕುಮಾರ್ ಇಬ್ಬರು ವ್ಯಕ್ತಿಗಳು ಬಿ.ಆರ್.ಟಿ ಹುಕಿ ರಕ್ಷಿತಾರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಫೈರ್ ಕ್ಯಾಂಪ್ ಹಾಕಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 27 ರ ರೀತ್ಯಾ ಪ್ರಕರಣ ದಾಖಲು ಮಾಡಲಾಗಿದೆ