ಹುಲಿ ದಾಳಿಗೆ ಹಸುವೊಂದು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಿಲಗೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಿಲಗೆರೆ ಗ್ರಾಮದ ಸಿದ್ದರಾಜು ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಜಮೀನಿನಲ್ಲಿ ಮೇವು ಮೇಯಿಸುತ್ತಿದ್ದ ವೇಳೆ ಹುಲಿ ದಿಢೀರ್ ದಾಳಿ ನಡೆಸಿ ಹಸುವನ್ನು ಎಳೆದೋಯ್ದು ಕೊಂದು ಹಾಕಿದೆ. ಮಾಲೀಕರು ಕೂಗಿ ಕೊಂಡ ಬಳಿಕ ಹಸುವನ್ನು ಬಿಟ್ಟು ಹೋಗಿದೆ. ಹುಲಿ ದಾಳಿಗೆ ಹಸು ಬಲಿಯಾಗಿರುವುದರಿಂದ ಮಾಲೀಕರಿಗೆ ತೀವ್ರ ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇನ್ನು ಮಲ್ಲಯ್ಯನಪುರ ಗ್ರಾಮದ ಕೆರೆಬದಿಯಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಹಸುವಿನ ಎಡಗಾಲಿಗೆ ತೀವ್ರತರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.