ಕೊಳ್ಳೇಗಾಲ ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸಂವಿಧಾನ ಸಮರ್ಪಣಾ ದಿನವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಿಜೆಪಿಗೆ ಸರಿಸಮಾನವಾದ ಪಕ್ಷ ಈ ದೇಶದಲ್ಲಿ ಇಲ್ಲವೇ ಇಲ್ಲ, ಪ್ರಜಾಪ್ರಭುತ್ವ ಅತೀ ದೊಡ್ಡ ಪಕ್ಷ ಇದ್ರೆ ಅದು ಪ್ರಧಾನಿ ಮಂತ್ರಿ ಮೋದಿಜೀ ಯವರ ಬಿಜೆಪಿ ಪಕ್ಷ, ಹಿಂದೆ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿತ್ತು ಇವಾಗ ಅದಕ್ಕೆ ವಯಸ್ಸು ಆಗಿದೆ. ಎಲ್ಲರಿಗೂ ವಯಸ್ಸು ಆಗುತ್ತೇ ಹಾಗೇ ಆ ಕಾಂಗ್ರೆಸ್ ಪಕ್ಷಕ್ಕೂ ವಯಸ್ಸು ಆಗಿದೆ.