ಶಿರಸಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತೋಟಕ್ಕೆ ನುಗ್ಗಿ ಜಕಂಗೊಂಡ ಘಟನೆ ಶಿರಸಿ ತಾಲೂಕಿನ ಅಮ್ಮಿನಳ್ಳಿ ಸಮೀಪದ ಚಂಡಮುರಕನ ಹಳ್ಳದ ಹತ್ತಿರ ಭಾನುವಾರ ಸಂಜೆ ಐದುವರೆ ಗಂಟೆ ಸುಮಾರಿಗೆ ನಡೆದಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಸತಿಪತಿಗಳಿಬ್ಬರೂ ಪವಾಡ ಸದೃಶ್ಯ ರೂಪದಲ್ಲಿ ಪಾರಾಗಿದ್ದಾರೆ. ಇವರಿಬ್ಬರೂ ಶಿರಸಿಯ ಮಾರಾಠಿಕೊಪ್ಪದವರೆಂದು ಹೇಳಲಾಗುತ್ತಿದೆ.