ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಸೋಮೇಶ್ವರ ಕೇರೆಯಲ್ಲಿ ಸುಮಾರು ಐದು ಆನೆಗಳು ಬಿಡುಬಿಟ್ಟಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೂರು ತಾಯಿ ಆನೆಗಳು ಹಾಗೂ ಎರಡು ಮರಿ ಆನೆಗಳು ಕರೆಗೆ ನೀರು ಕುಡಿಯುವ ಸಲುವಾಗಿ ಅರಣ್ಯದಿಂದ ಹೊರಬಂದು ಕರೆಯ ಸಮೀಪಕ್ಕೆ ತಲುಪಿವೆ. ಆನೆಗಳ ಈ ಅಚಾನಕ್ ಆಗಮನದಿಂದ ಕರೆಯ ಬಳಿ ಇದ್ದ ಸಾರ್ವಜನಿಕರು ಕ್ಷಣಿಕ ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳೀಯರು ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಹಲವು ತಾಸುಗಳಕಾಲ ಕೆರೆಯಲ್ಲಿ ಆನೆಗಳು ಬಿಡುಬಿಟ್ಟಿದ್ದವು