ಶಿರಸಿ: ನ.10 ರಂದು ಬಣ್ಣದ ಮಠದ ಶ್ರೀಗುರುಸಿದ್ಧೇಶ್ವರ ಸಾಂಸ್ಕೃತಿಕ ಭವನ ಲೋಕಾರ್ಪಣೆ,ಮೂರು ಸಾವಿರಮಠ ಸ್ವಾಮೀಜಿ ಸಾನಿಧ್ಯ
ಶಿರಸಿ: ನವೆಂಬರ 10
ಶಿರಸಿ: ನವೆಂಬರ 10 ಬಣ್ಣದ ಮಠದ ಶ್ರೀ ಗುರುಸಿದ್ಧೇಶ್ವರ ಸಾಂಸ್ಕೃತಿಕ ಭವನ ಉದ್ಘಾಟನಾ ಸಮಾರಂಭ ಹಾಗೂ ಶ್ರೀಮಠದ ದೀಪೋತ್ಸವ ಕಾರ್ಯಕ್ರಮಗಳು ಜರಗುತ್ತವೆ. ಎಂದು ನಗರದ ಶ್ರೀ ಬಣ್ಣದ ಮಠದಲ್ಲಿಸುದ್ದಿಗೋಷ್ಠಿಯಲ್ಲಿ ಶ್ರೀ ಮಠದ ವ್ಯವಸ್ಥಾಪಕ ಎಸ್ ಬಿ ಹಿರೇಮಠ ಹೇಳಿದರು. ನವೆಂಬರ್ 10 ರಂದು ಬೆಳಿಗ್ಗೆ 8 :00 ಗಂಟೆಗೆ ಶ್ರೀ ಬಣ್ಣದ ಮಠದ ಕರ್ತೃಗದ್ದುಗೆಗಳಿಗೆ ಹಾಗೂ ನಾಗ ದೇವರಿಗೆ ಮತ್ತು ಉಣ್ಣಿಮಠದ ಶ್ರೀ ಕಪನಂಜೇಶ್ವರ ಹಾಗೂ ನಾಗಚೌಡೇಶ್ವರಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.