ಬೆಂಗಳೂರು ದಕ್ಷಿಣ: ಸ್ನೇಹಿತ ಹಾಗೂ ಸ್ಥಳೀಯರ ನಿರ್ಲಕ್ಷ್ಯ ಕೆ.ಎಂ.ಎಫ್ ಕಚೇರಿ ಮುಂದೆ ವ್ಯಕ್ತಿ ಸಾವು
ಸ್ನೇಹಿತನ ಹಾಗೂ ಸ್ಥಳೀಯರ ನಿರ್ಲಕ್ಷ್ಯ, ರಾತ್ರಿಯಿಡೀ ಒದ್ದಾಡಿ ಒದ್ದಾಡಿ ಜೀವ ಬಿಟ್ಟ ವ್ಯಕ್ತಿ.. KMF ಕಚೇರಿ ಮುಂದೆ ಒದ್ದಾಡಿ ಜೀವ ಬಿಟ್ಟ ವ್ಯಕ್ತಿ.. ಗೂಡ್ಸ್ ವಾಹನದಲ್ಲಿ ಸ್ನೇಹಿತನ ಜೊತೆ ಬರ್ತಿದ್ದ ಮೃತ ವ್ಯಕ್ತಿ, ಈ ವೇಳೆ ವಾಹನ ಸಂಪೂರ್ಣ ಪಲ್ಟಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಮೃತ ವ್ಯಕ್ತಿಯನ್ನ ಸ್ಥಳೀಯರು ವಾಹನ ನಿಲ್ಲಿಸಿ ಇಬ್ಬರಿಗೂ ಸಹಾಯ ಮಾಡಿದ್ರು. ತೀವ್ರ ಗಾಯಗೊಂಡಿದ್ದ ಮೃತನನ್ನ KMF ನ ಫುಟ್ ಪಾತ್ ಮೇಲೆ ಕೂರಿಸಿ ಹೋಗಿದ್ರು. ತೀವ್ರ ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿ ಕೆಲ ಹೊತ್ತಿನ ನಂತರ ಪ್ರಜ್ಞೆ ತಪ್ಪಿದ್ದ. ಅದನ್ನ ನೋಡಿ ಭಯಗೊಂಡು ಎಸ್ಕೇಪ್ ಆಗಿದ್ದ ಗೂಡ್ಸ್ ವಾಹನ ಚಾಲಕ. ರಾತ್ರಿಯಿಡೀ ಒದ್ದಾಡಿ ಜೀವ ಬಿಟ್ಟಿರುವ ವ್ಯಕ್ತಿ.