ಚಳ್ಳಕೆರೆ: ನಗರದ ತಾ.ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ: ಶಾಸಕ ಟಿ.ರಘುಮೂರ್ತಿ ಭಾಗಿ
ನಗರದ ತಾ.ಕಚೇರಿಯಲ್ಲಿ ಬುಧವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು. ನಂತರ ಮಾತನಾಡಿ ಮಹಾನ್ ನಾಯಕರುಗಳ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸಮಾಜದಲ್ಲಿ ಯುವಕರು ಮುನ್ನಡೆಯಬೇಕು ಎಂದರು. ಈ ವೇಳೆ ನಗರಸಭೆ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷೆ ಕವಿತಾ, ತಹಶೀಲ್ದಾರ್ ರೇಹಾನ್ ಪಾಷಾ, ತಾಪಂ ಇಒ ಶಶಿಧರ್, ಪೌರಾಯುಕ್ತ ಜಗ್ಗರೆಡ್ಡಿ ಇದ್ದರು.