ಕಾರವಾರ: ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ 59.5 ಲಕ್ಷ ಕಳೆದುಕೊಂಡ ಸದಾಶಿವಡದ ವ್ಯಕ್ತಿ: ದೂರು ದಾಖಲು
ಆನ್ಲೈನ್ ಟ್ರೇಡಿಂಗ್ ಮೂಲಕ ಸುಲಭವಾಗಿ ಹೆಚ್ಚು ಹಣ ಗಳಿಸುವ ಆಮಿಷವೊಡ್ಡಿ, ವ್ಯಕ್ತಿಯೊಬ್ಬರಿಂದ ಬರೋಬ್ಬರಿ 59,50,000 ರೂ. ವಂಚಿಸಲಾಗಿದೆ. ಈ ಕುರಿತು ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಂಗಳವಾರ ಸಂಜೆ 6ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ ಹೊಟೇಲ್ ಕೆಲಸ ಮಾಡುವ ತಾಲೂಕಿನ ಸದಾಶಿವಗಡದ ಪಂಕಜ ಎಂಬಾತ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ. ಕಾರವಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.