ರಾಯಚೂರು: ನಗರದಲ್ಲಿ ದೇವದುರ್ಗದ ಹಾಲಿ ಮತ್ತು ಮಾಜಿ ಶಾಸಕರ ವಿರುದ್ಧ ಆಕ್ರೋಶ; ಮೂಲಭೂತ ಸೌಲಭ್ಯಕ್ಕಾಗಿ ಬೃಹತ್ ಪ್ರತಿಭಟನೆ
ತಾಲೂಕಿನ ಕರಿಗುಡ್ಡ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಮತ್ತು ವಸತಿ ಸೌಕರ್ಯವನ್ನು ನೀಡದ ದೇವದುರ್ಗ ತಾಲೂಕು ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ರಾಯಚೂರು ನಗರದಲ್ಲಿ ಸೆ.17 ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಹನುಮಂತಪ್ಪ ಕಾಕರಗಲ್ ಮಾತನಾಡಿ, ಮಾಜಿ ಶಾಸಕ ಕೆ ಶಿವನಗೌಡ ನಾಯಕ್ ಅವರು ಬಡವರ ಪರ ಕೆಲಸ ಮಾಡಲಿಲ್ಲ. ಇದೀಗ ಶಾಸಕರಾಗಿರುವ ಕರೆಮ್ಮ ನಾಯಕ್ ಅವರು ಕೂಡ ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದಲಿತರ ಏಳಿಗೆಗೆ ದುಡಿಯುತ್ತಿಲ್ಲ. ಹೀಗಾಗಿ ಇದೆಲ್ಲವನ್ನು ನಾವು ಎದುರಿಸಿ ವಸ