ಕೋಲಾರ: ವಾಸವಿ ದೇವಾಲಯದಲ್ಲಿ ದೇವರಿಗೆ ಮಡಿಲು ತುಂಬುವ ಕಾರ್ಯಕ್ರಮ
Kolar, Kolar | Nov 29, 2025 ರಾಜ್ಯ ಆರ್ಯವೈಶ್ಯ ಶ್ರೀ ವಾಸವಿ ಮಹಾ ಮಂಡಳಿ ವತಿಯಿಂದ ಮುಳಬಾಗಿಲು ನಗರದ ವಾಸವಿ ದೇವಾಲಯದಲ್ಲಿ ಶನಿವಾರ ಸಾಂಪ್ರದಾಯಿಕವಾಗಿ ದೇವರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯಿತು. ಬೆಂಗಳೂರಿನಿಂದ ಆಗಮಿಸಿದ್ದ 80 ಮಹಿಳೆಯರು ಮತ್ತು ಮುಳಬಾಗಿಲು ಆರ್ಯವೈಶ್ಯ ಮಹಿಳಾ ಘಟಕದ ಸದಸ್ಯರು ದೇವರಿಗೆ ಹೂ, ಬಾಳೆಹಣ್ಣು, ಅರಿಶಿನ ಕುಂಕುಮ, ಬಳೆ ಹಾಗೂ ಇತರ ಮಂಗಳಕರ ವಸ್ತುಗಳನ್ನು ಶ್ರದ್ಧಾ ಭಕ್ತಿಯಿಂದ ಅರ್ಪಿಸಿದರು.