ಕಲಬುರಗಿ : ಇತ್ತೀಚಿಗಷ್ಟೆ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿತ್ತು.. ಅದರಂತೆ ಸರ್ಕಾರ ಪರಿಹಾರ ಕೂಡ ಬಿಡುಗಡೆ ಮಾಡಿದೆ.. ಆದರೆ ಜಿಲ್ಲೆಯ 12313 ಜನ ರೈತರು ಎಫ್ಐಡಿ ಮಾಡಿಸಿದ್ರು ಸಹ ಪರಿಹಾರ ಹಣ ಜಮೆ ಆಗದಿರೋದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಡಿ2 ರಂದು ಮಧ್ಯಾನ 1 ಗಂಟೆಗೆ ನಗರದಲ್ಲಿ ಮಾತನಾಡಿದ ರೈತರು, ಒಂದು ಕಡೆ ಕೆಲ ರೈತರಿಗೆ ಪರಿಹಾರ ಸಿಗದೇ ಪರದಾಟ ನಡೆಸ್ತಿದ್ರೆ ಮತ್ತೊಂದೆಡೆ ಸರ್ಕಾರದಿಂದ ಪರಿಹಾರ ಅಕೌಂಟ್ಗೆ ಜಮೆ ಆಗ್ತಿದ್ದಂತೆ ಆ ಪರಿಹಾರ ಹಣವನ್ನ ರೈತರು ಪಡೆದ ಸಾಲವನ್ನ ಅಕೌಂಟ್ಗೆ ಮುರಿದುಕೊಳ್ತಿದಾರೆ.