ಕಲಬುರಗಿ: ಮುತ್ತು ಕೊಡುವ ಪೋಟೋ ವಾಟ್ಸಪ್ನಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ಮೇಲ್; ನಗರದಲ್ಲಿ ದಂಪತಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ ನಗರದ ಮಾಲಗತ್ತಿ ಕ್ರಾಸ್ ಹತ್ತಿರದ ನಿವಾಸಿಯಾಗಿರುವ ಮಹಿಳೆ ವಿವಿ ಠಾಣೆಯಲ್ಲಿ ದಂಪತಿ ಹಾಗೂ ಇಬ್ಬರು ಮಹಿಳೆಯರ ವಿರುದ್ಧ ಬ್ಲ್ಯಾಕ್ಮೇಲ್ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ದೂರು ನೀಡಿದ ಮಹಿಳೆಗೆ ಮಹ್ಮದ್ ಶಕೀಲ್ ಎಂಬಾತ ಪರಿಚಯವಾಗಿ ಆಕೆಯನ್ನ ಹಿಂಬಾಲಿಸುತ್ತಿದ್ದ, ಗಂಡ ಹಾಗೂ ಗಂಡನಮನೆಯವರು ನೋಡಿದರೆ ಸರಿಯಿರಲ್ಲ ಹಿಂದಿಂದೆ ಬರಬೇಡಾ ಅಂದರೂ ಕೇಳುತ್ತಿರಲಿಲ್ಲ, ಈ ನಡುವೆ ಮಹ್ಮದ್ ಶಕೀಲ್ ಹಾಗೂ ಆತನ ಪತ್ನಿ ಮೊಬೈಲ್ ಕರೆ ಮಾಡಿ ಹಣ ಕೊಡು ಇಲ್ಲದಿದ್ದರೆ ಮಹ್ಮದ್ ಶಕೀಲ್ ಜೊತೆಗೆ ಇರುವ ಪೊಟೋ ಮತ್ತು ಮುತ್ತು ಕೊಡುವ ಪೊಟೋ ವಾಟ್ಸಪ್ ಮುಖಾಂತರ ಹರಿಬಿಡುವದಾಗಿ ಬೇದರಿಕೆ ಹಾಕಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ. ಮತ್ತೊಂದಡೆ ಮಹ್ಮದ್ ಶಕೀಲ್ ನ ಅಕ್ಕನ