ಮಳವಳ್ಳಿ : ಅಕ್ರಮವಾಗಿ ಜನ ಜಾಜಾಟದಲ್ಲಿ ತೊಡಗಿದ್ದ ಗುಂಪೊಂದರ ಮೇಲೆ ದಾಳಿ ಮಾಡಿರುವ ಗ್ರಾಮಾಂತರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಳವಳ್ಳಿ ತಾಲ್ಲೂಕಿನ ಕೆಂಬೂತ ಗೆರೆ ಗ್ರಾಮದ ನಾಲಾ ರಸ್ತೆ ಬದಿಯಲ್ಲಿ ಗುಂಪೊಂದು ಅಕ್ರಮವಾಗಿ ಜೂಜಾಟದಲ್ಲಿ ತೊಡಗಿರುವ ಮಾಹಿತಿ ಮೇರೆಗೆ ಶನಿವಾರ ಸಂಜೆ 7 ಗಂಟೆ ಸಮಯದಲ್ಲಿ ದಾಳಿ ನಡೆಸಿರುವ ಪಿ ಎಸ್ ಐ ಶಿವಶಂಕರ್ ಹಾಗೂ ಸಿಬ್ಬಂದಿ ಮೂವರನ್ನು ಬಂಧಿಸಿ ಫಣವಾಗಿ ಟ್ಟಿದ್ದ 7300 ರೂಗಳನ್ನು ವಶಪಡಿ ಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.