ಹನೂರು: ಹನೂರಲ್ಲಿ ವಿಶ್ವಕರ್ಮ ಜಯಂತಿ: ಶ್ರಮಜೀವಿಗಳ ಪಾತ್ರವನ್ನು ಮೆರೆದ ತಹಸಿಲ್ದಾರ್ ಚೈತ್ರ ಬಾಷಣ
ಹನೂರು: ಹನೂರು ತಾಲ್ಲೂಕು ಆಡಳಿತದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾ ಮತ್ತು ಶಿಸ್ತಿನಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ತಹಸಿಲ್ದಾರ್ ಚೈತ್ರ ರವರು ದೇವಶಿಲ್ಪಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಹಸಿಲ್ದಾರ್ ಚೈತ್ರ ಅವರು, ವಿಶ್ವಕರ್ಮರು ಶಿಲ್ಪಕಲೆ, ತಾಂತ್ರಿಕ ಜ್ಞಾನ ಹಾಗೂ ನಿರ್ಮಾಣ ಕ್ಷೇತ್ರದ ಪ್ರೇರಕ ಶಕ್ತಿ. ಪ್ರಸ್ತುತ್ತ ದೇಶದ ಪ್ರಗತಿಗೆ ಶ್ರಮಜೀವಿಗಳು ಮತ್ತು ಕೌಶಲ್ಯವಂತರು ಮೌಲ್ಯವತ್ತಾದ ಕೊಡುಗೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಜಯಂತಿಯ ಆಚರಣೆ ಪ್ರಸ್ತುತ ಸಮಯದಲ್ಲಿ ಇನ್ನಷ್ಟು ಮಹತ್ವ ಪಡೆದಿದೆ,ಎಂದು ಹೇಳಿದರು.