ಬೆಂಗಳೂರು ಉತ್ತರ: ಜೈಲಿನಲ್ಲಿ ರಾಜಾತೀಥ್ಯ; ಸಮರ್ಥನೆ ಮಾಡಿಕೊಳ್ಳೋದಿಲ್ಲ, ಸಿಎಂ, ಹೋಂ ಮಿನಿಸ್ಟರ್ ಕ್ರಮ ತೆಗೆದುಕೊಳ್ತಾರೆ: ನಗರದಲ್ಲಿ ಪ್ರದೀಪ್ ಈಶ್ವರ್
ಜೈಲಿನಲ್ಲಿ ರಾಜಾತೀಥ್ಯ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 4:30 ರ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ನಾವು ಅದನ್ನ ಸಮರ್ಥಿಸಿಕೊಳ್ತಿಲ್ಲ. ಈ ಬಗ್ಗೆ ನಮ್ಮ ಸಿಎಂ,ಹೋಂ ಮಿನಿಸ್ಡರ್ ಕ್ರಮ ಕೈಗೊಳ್ತಾರೆ. ನಾವು ಇನ್ಸಿಡೆಂಟ್ ಸಮರ್ಥಿಸಿಕೊಳ್ತಿಲ್ಲ. ಬಿಜೆಪಿಯವರು ಇದ್ದಾಗ ತಿಹಾರ್ ನಲ್ಲೂ ಆಗಿತ್ತು. ಇದು ಪದೇ ಪದೇ ಆಗೋಕೆ ಬಿಡಲ್ಲ. ಯಾರೋ ಒಬ್ಬ ಅಧಿಕಾರಿ ತಪ್ಪು ಮಾಡಿರಬಹುದು. ಆ ತಪ್ಪನ್ನ ನಾವು ಸಮರ್ಥಿಸಿಕೊಳ್ಳಲ್ಲ. ಅವರ ವಿರುದ್ಧ ನಾವು ಕ್ರಮ ಕೈಗೊಳ್ತೇವೆ. ನಮ್ಮ ಸಿಎಂ,ಹೋಂ ಮಿನಿಸ್ಟರ್ ಕ್ರಮ ಕೈಗೊಳ್ತಾರೆ ಎಂದರು.